ಮಕ್ಕಳಿಗೆ, ಪಕ್ಷಿಗಳು ಮತ್ತು ಪ್ರಕೃತಿಯೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಆಗುವ ಸಂಪನ್ಮೂಲಗಳನ್ನು ಹುಡುಕುತ್ತಿರುವಿರಾ? ನಾವು ಒಟ್ಟು ಸೇರಿಸಿದ ಕೆಲವು ಸಂಪನ್ಮೂಲಗಳು ಮತ್ತು ಸಾಧನಗಳು ಇಲ್ಲಿವೆ. ತರಗತಿಯ ವಾತಾವರಣದಲ್ಲಿ ಅಥವಾ ಹೊರಾಂಗಣ ವಾತಾವರಣದಲ್ಲಿ ಮಕ್ಕಳಿಗೆ, ಒಬ್ಬೊಬ್ಬರೇ ಅಥವಾ ಗುಂಪುಗಳಲ್ಲಿ ತಮ್ಮದೇ ಆದ ಆಟವಾಡಲು ಇವು ಸೂಕ್ತವಾಗಿವೆ. ಇವುಗಳ ಉತ್ತಮ ಬಳಕೆ ಮಾಡಲು ಮತ್ತು ಡೌನ್ಲೋಡ್ ಮಾಡಿ ಬಳಸಲು ಹಿಂಜರಿಯಬೇಡಿ!
ಹಕ್ಕಿಗಳ ಮೂಲಕ ಮಕ್ಕಳನ್ನು ಪ್ರಕೃತಿಯೊಂದಿಗೆ ಸಂಪರ್ಕಿಸಲು ಕೇಂದ್ರೀಕರಿಸಿದ ವಿಷಯ ರಚನೆ, ಸಹಕರಿಸುವ ತರಬೇತಿ ಮತ್ತು ಇವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಯೋಜನೆಗಳಲ್ಲಿ ನಾವು ತೊಡಗಿಕೊಂಡಿದ್ದೇವೆ. ನಮ್ಮ ಸಂಪನ್ಮೂಲಗಳನ್ನು ಬಳಸುವ ಮೂಲಕ ಅಥವಾ ಖರೀದಿಸುವ ಮೂಲಕ, ನೀವು ಭಾರತದಲ್ಲಿ ಸಂರಕ್ಷಣಾ ಕಾರ್ಯವನ್ನು ಸಹಕರಿಸುವುದಲ್ಲದೇ, ಬೆಳೆಯುತ್ತಿರುವ ಪಕ್ಷಿ / ಪ್ರಕೃತಿ ಶಿಕ್ಷಣ–ತಜ್ಞರ ಗುಂಪಿಗೆ ಸೇರುತ್ತೀರ.
ಈ ಸಂಪನ್ಮೂಲಗಳ ಬಗ್ಗೆ ಸಲಹೆಗಲಿದಲ್ಲಿ, ಫೇಸ್ಬುಕ್, ಟ್ವಿಟರ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಅಥವಾ ಇಮೇಲ್ನ ಮೂಲಕ ನಮಗೆ ತಲುಪಿಸಿ. ನಿಮ್ಮ ಸಲಹೆ ಹಾಗು ಇತರ ಹೇಳಿಕೆಗಳು ನಮ್ಮ ಸ್ವ–ಅಭಿವೃಧಿಗೆ ಅಮೂಲ್ಯ.

‘ಯಾವುದೀ ಹಕ್ಕಿ?’ ಫ್ಲ್ಯಾಶ್ ಕಾರ್ಡ್ ಗಳು
ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ 40 ಹಕ್ಕಿಗಳನ್ನು ಪರಿಚಯಿಸುವ ಮೋಜಿನ, ಶೈಕ್ಷಣಿಕ ಆಟ. ಪ್ರತಿ ಕಾರ್ಡು, ಹಕ್ಕಿ ಪ್ರಭೇದವೊಂದನ್ನು ಹೊಂದಿದ್ದು, ಒಂದು ಬದಿಯಲ್ಲಿ ಛಾಯಾಚಿತ್ರ ಇನ್ನೊಂದೆಡೆ ಆವಾಸಸ್ಥಾನ, ಆಹಾರ, ಗಾತ್ರ, ಹಕ್ಕಿಯ ನಡವಳಿಕೆ ಹಾಗೂ ವ್ಯಾಪ್ತಿಯ ಬಗ್ಗೆ ಮಾಹಿತಿ, ಮತ್ತು ಮೋಜಿನ ಸಂಗತಿ ವಿಭಾಗವನ್ನು ಹೊಂದಿದೆ. ಈ ಕಾರ್ಡು ಗಳನ್ನು ಮಕ್ಕಳು ಅಥವಾ ವಯಸ್ಕರು (ಆರಂಭಿಕ ಪಕ್ಷಿವೀಕ್ಷಕರು) ಒಳಾಂಗಣ ಅಥವಾ ಹೊರಾಂಗಣದಲ್ಲಿ ಬಳಸಬಹುದು. ಫ್ಲ್ಯಾಶ್ ಕಾರ್ಡ್ ಗಳ ಸೆಟ್ ಅನ್ನು ಖರೀದಿಸಿ ಮತ್ತು ಇವುಗಳೊಂದಿಗೆ ಆಡಬಹುದಾದ ಆಟಗಳ ಸೂಚನೆಯ ವೀಡಿಯೊಗಳನ್ನು ವೀಕ್ಷಿಸಿ. ಆಟಗಳನ್ನು ಆಡಲು ಪಠ್ಯ ಸೂಚನೆಗಳು (ಪಿಡಿಎಫ್) ಮತ್ತು ಆಟ 3 ಕ್ಕೆ ಬೇಕಾದ ಹಕ್ಕಿ ಕರೆಗಳನ್ನು ಡೌನ್ಲೋಡ್ ಮಾಡಲು ಕೆಳಗಿನ ಡೌನ್ಲೋಡ್ ಲಿಂಕ್ ಅನ್ನು ಒತ್ತಿ.

ಪಾಕೆಟ್ ಗೈಡ್‌ಗಳು
ವಿವಿಧ ವಿಶಿಷ್ಟ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಗಳನ್ನು ಪಟ್ಟಿ ಮಾಡುವ ಚಿತ್ರಿತ ಗೈಡ್ ಗಳು. ಇವು ಹಕ್ಕಿ ವೀಕ್ಷಣೆ ಮಾಡುವಾಗ ಕೊಂಡೊಯ್ಯಲು ಸೂಕ್ತ . ಹಕ್ಕಿಗಳನ್ನು, ನೆಲೆ-ನಡೆವಳಿಕೆಗಳ ಮೂಲಕ ಬೇರ್ಪಡಿಸಿ, ಗುಂಪುಮಾಡಲ್ಪಟ್ಟಿದೆ. ಸೂಕ್ತವಾದ ಚಿನ್ನೆಗಳು ಹೆಚ್ಚಿನ ಮಾಹಿತಿ ಸೂಚಿಸುತ್ತವೆ. ಸುಲಭವಾಗಿ ಜೇಬಿನಲ್ಲಿ ಹಿಡಿಯುತವೆ ಹಾಗು ಕೈಯಲ್ಲಿ ಹಿಡಿದು ವೀಕ್ಷಿಸುತಿರುವ ಹಕ್ಕಿಯ ಮಾಹಿತಿ ಹೋಲಿಕೆ ಮಾಡಲು ಸಹಕರಿಸುತ್ತವೆ. ಮೈದಾನದಲ್ಲಿ ಬಳಸಲು ಸುಲಭ ಮತ್ತು ಗಾಳಿ-ಮಳೆಯಿಂದ ರಕ್ಷಣೆಗಾಗಿ ಲ್ಯಾಮಿನೇಷನ್ ಇದೆ. ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ - ಅವುಗಳನ್ನು ಇಲ್ಲಿ ಖರೀದಿಸಿ ಅಥವಾ 50 ಅಥವಾ ಹೆಚ್ಚಿನ ಸೊಂಖ್ಯೆ ಬೇಕಾದಲ್ಲಿ ಬೃಹತ್ ರಿಯಾಯಿತಿಯನ್ನು ಪಡೆಯಿರಿ .

ಪಕ್ಷಿಗಳ ಬಿಂಗೊ
ಸರಳವಾದ ಈ ‘ಬಿಂಗೊ’ ಆಟ ಮಕ್ಕಳಿಗೆ ಹೊರಾಂಗಣ ಪ್ರದೇಶಗಳನ್ನು ಅನ್ವೇಷಿಸಲು, ಪಕ್ಷಿಗಳನ್ನು ವೀಕ್ಷಿಸಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕ ಮಾಡಲು ಸೂಕ್ತ.

ಪಕ್ಷಿ ಬದುಕು-ಉಳಿಯುವಿಕೆ ಆಟ
ಈ ಆಟವನ್ನು ಎಲ್ಲಿ ಬೇಕಾದರೂ ಆಡಬಹುದು. ಹೊರಾಂಗಣ ಪರಿಸರದಲ್ಲಿ ಮಕ್ಕಳು ಗುಂಪಿನಲ್ಲಿ ಆಡಲು ಸೂಕ್ತ. ಪಕ್ಷಿಯಾಗಿ ಬದುಕುವುದು ಎಷ್ಟು ಕಷ್ಟ ಎಂಬುದರ ಬಗ್ಗೆ ಮಕ್ಕಳು ಚಿಂತನೆ ಮಾಡಲು ಸಹಾಯ ಮಾಡುತದೆ

ಪ್ರಕೃತಿಯ ಪೆಟ್ಟಿಗೆ
ಅರ್ಲಿ ಬರ್ಡ್ ಮತ್ತು ನೇಚರ್ ಕ್ಲಾಸ್ ರೂಮ್ಸ್ ವತಿಯಿಂದ ಕನ್ನಡ ಪ್ರಕೃತಿ ಶಿಕ್ಷಣ ಪೆಟ್ಟಿಗೆ. ತರಗತಿಗಳು ಅಥವಾ ಗ್ರಂಥಾಲಯಗಳಿಗೆ ಸೂಕ್ತವಾದ ಈ ಸಮಗ್ರ ಪೆಟ್ಟಿಗೆಯಲ್ಲಿ, ಮಕ್ಕಳಲ್ಲಿ ನೈಸರ್ಗಿಕ ಪ್ರಪಂಚದ ಬಗ್ಗೆ ಕುತೂಹಲವನ್ನು ಹುಟ್ಟುಹಾಕಲು ಉಪಯುಕ್ತವಾಗುವಂತಹ ಸಂಪನ್ಮೂಲಗಳಿವೆ. ಪೆಟ್ಟಿಗೆಯೊಳಗೆ ಈ ಸಂಪನ್ಮೂಲಗಳಿವೆ: ಕರ್ನಾಟಕದ ಪಕ್ಷಿಗಳು ಕೈಪಿಡಿ, ಪಕ್ಷಿ ಮತ್ತು ಸಸ್ಯಗಳ ಪೋಸ್ಟರ್‌ಗಳು, ಕರ್ನಾಟಕದ ಪಕ್ಷಿಗಳ ಫ್ಲ್ಯಾಶ್‌ಕಾರ್ಡ್‌ಗಳು, ಸೃಜನಶೀಲ ಚಟುವಟಿಕೆಗಳು ಮತ್ತು ಆಟಗಳು, 'ಅಲ್ಲಿ ಏನೂ ಇಲ್ಲ' ಕಥೆಪುಸ್ತಕ, ಪ್ರಾಣಿ-ಪಕ್ಷಿಗಳ ನೈರ್ಮಲ್ಯತೆ, ಮತ್ತು ಗೆದ್ದಲುಗಳ ಬಗ್ಗೆ ಕಿರುಪುಸ್ತಕಗಳು. ಪಕೃತಿ ಪೆಟ್ಟಿಗೆಯನ್ನು ನಮ್ಮ ಆನ್ಲೈನ್ ಸ್ಟೋರ್ ನಲ್ಲಿ ಖರೀದಿಸಬಹುದು .

ಹೊಂದಾಣಿಕೆ ಮಾಡುವ ಆಟ
ಹೊರಾಂಗಣ ಪರಿಸರದಲ್ಲಿ ಮಕ್ಕಳ ಗುಂಪಿಗೆ ಸೂಕ್ತ. ಈ ಆಟವನ್ನು ಎಲ್ಲಿ ಬೇಕಾದರೂ ಆಡಬಹುದು. ಪಕ್ಷಿಗಳ ನಡವಳಿಕೆ ಮತ್ತು ಜೈವಿಕ ಚಕ್ರದ ಬಗ್ಗೆ ತಿಳುವಳಿಕೆ ನೀಡುತ್ತದೆ. ಆಟಗಾರರು ಹಕ್ಕಿಯಾಗಿರುವುದು ಎಷ್ಟು ಕಷ್ಟ ಎಂದು ಕಾಲ್ಪಿಸಿಕೊಳ್ಳಲು ಸಹಾಯ ಮಾಡುತ್ತೆದೆ.

ನಮ್ಮ ಸುತ್ತಲಿನ ಪಕ್ಷಿಗಳು
ಭಾರತದಲ್ಲಿ ನಮ್ಮ ಸುತ್ತಲೂ ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳನ್ನು ಈ ಪೋಸ್ಟರ್ ಪ್ರದರ್ಶಿಸುತ್ತದೆ. ಸಂವಾದಾತ್ಮಕ ಸ್ವರೂಪದಲ್ಲಿ ಈ ಪೋಸ್ಟರ್ ಮೂಲಕ ಹಕ್ಕಿಗಳ ಕರೆಗಳಬಗ್ಗೆ ಹಾಗು ಇತರ ಮಾಹಿತಿ ಪಡೆಯಿರಿ. ಅನೇಕ ಭಾಷೆಗಳಲ್ಲಿ ಲಭ್ಯ. ಪ್ರದರ್ಶನಕ್ಕಾಗಿ ದೊಡ್ಡ ಸ್ವರೂಪದ ಮುದ್ರಣ-ಆವೃತ್ತಿಯನ್ನು ನಮ್ಮಲಿ ಖರೀದಿಸಿ .

ತೇವಭೂಮಿ ಪಕ್ಷಿಗಳು
ಭಾರತದ ನೀರಾವರಿ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಗಳನ್ನು ಈ ಪೋಸ್ಟರ್ ಪ್ರದರ್ಶಿಸುತ್ತದೆ. ಸಂವಾದಾತ್ಮಕ ಸ್ವರೂಪದಲ್ಲಿ ಈ ಪೋಸ್ಟರ್ ಮೂಲಕ ಹಕ್ಕಿಗಳ ಕರೆಗಳಬಗ್ಗೆ ಹಾಗು ಇತರ ಮಾಹಿತಿ ಪಡೆಯಿರಿ. ಅನೇಕ ಭಾಷೆಗಳಲ್ಲಿ ಲಭ್ಯ. ಪ್ರದರ್ಶನಕ್ಕಾಗಿ ದೊಡ್ಡ ಸ್ವರೂಪದ ಮುದ್ರಣ-ಆವೃತ್ತಿಯನ್ನು ನಮ್ಮಲಿ ಖರೀದಿಸಿ .

ಅರಣ್ಯ ಮತ್ತು ಪೊದೆಗಳು ಪಕ್ಷಿಗಳು
ಭಾರತದ ಅರಣ್ಯ ಹಾಗು ಕುರುಚಲು-ಪೊದೆ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಗಳನ್ನು ಈ ಪೋಸ್ಟರ್ ಪ್ರದರ್ಶಿಸುತ್ತದೆ. ಸಂವಾದಾತ್ಮಕ ಸ್ವರೂಪದಲ್ಲಿ ಈ ಪೋಸ್ಟರ್ ಮೂಲಕ ಹಕ್ಕಿಗಳ ಕರೆಗಳಬಗ್ಗೆ ಹಾಗು ಇತರ ಮಾಹಿತಿ ಪಡೆಯಿರಿ. ಅನೇಕ ಭಾಷೆಗಳಲ್ಲಿ ಲಭ್ಯ. ಪ್ರದರ್ಶನಕ್ಕಾಗಿ ದೊಡ್ಡ ಸ್ವರೂಪದ ಮುದ್ರಣ-ಆವೃತ್ತಿಯನ್ನು ನಮ್ಮಲಿ ಖರೀದಿಸಿ .

ಹುಲ್ಲುಗಾವಲು ಮತ್ತು ಕೃಷಿಭೂಮಿ ಪಕ್ಷಿಗಳು
ಭಾರತದ ಹುಲ್ಲುಗಾವಲು ಹಾಗು ಹೊಲ-ಗದ್ದೆ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಗಳನ್ನು ಈ ಪೋಸ್ಟರ್ ಪ್ರದರ್ಶಿಸುತ್ತದೆ. ಸಂವಾದಾತ್ಮಕ ಸ್ವರೂಪದಲ್ಲಿ ಈ ಪೋಸ್ಟರ್ ಮೂಲಕ ಹಕ್ಕಿಗಳ ಕರೆಗಳಬಗ್ಗೆ ಹಾಗು ಇತರ ಮಾಹಿತಿ ಪಡೆಯಿರಿ. ಅನೇಕ ಭಾಷೆಗಳಲ್ಲಿ ಲಭ್ಯ. ಪ್ರದರ್ಶನಕ್ಕಾಗಿ ದೊಡ್ಡ ಸ್ವರೂಪದ ಮುದ್ರಣ-ಆವೃತ್ತಿಯನ್ನು ನಮ್ಮಲಿ ಖರೀದಿಸಿ .

ಮಾನವ ವಾಸಸ್ಥಳದ ಸುತ್ತಲಿನ ಪಕ್ಷಿಗಳು
ಭಾರತದ ಜನ ವಸತಿ ನೆಲೆಗಳ ಸುತ್ತಾ ಮುತ್ತಾ ಕಂಡುಬರುವ ಪಕ್ಷಿಗಳನ್ನು ಈ ಪೋಸ್ಟರ್ ಪ್ರದರ್ಶಿಸುತ್ತದೆ. ಸಂವಾದಾತ್ಮಕ ಸ್ವರೂಪದಲ್ಲಿ ಈ ಪೋಸ್ಟರ್ ಮೂಲಕ ಹಕ್ಕಿಗಳ ಕರೆಗಳಬಗ್ಗೆ ಹಾಗು ಇತರ ಮಾಹಿತಿ ಪಡೆಯಿರಿ. ಅನೇಕ ಭಾಷೆಗಳಲ್ಲಿ ಲಭ್ಯ. ಪ್ರದರ್ಶನಕ್ಕಾಗಿ ದೊಡ್ಡ ಸ್ವರೂಪದ ಮುದ್ರಣ-ಆವೃತ್ತಿಯನ್ನು ನಮ್ಮಲಿ ಖರೀದಿಸಿ .

ಚುಕ್ಕೆಗಳಿಗೆ ಸೇರಿ – ಬಲ್ಬುಲ್
ಈ ಚುಕ್ಕಿಗಳನ್ನು ಸೇರಿಸುವ ಚಟುವಟಿಕೆಯ ಮೂಲಕ ಮಕ್ಕಳು, ಚಿತ್ರ-ರಚನೆ ಮಾಡಿ ಪಕ್ಷಿಗಳನ್ನು ಗುರುತಿಸಲು ಕಲಿಯಬಹುದು.

ಚುಕ್ಕೆಗಳಿಗೆ ಸೇರಿ – ಕಿಂಗ್‌ಫಿಶರ್
ಈ ಚುಕ್ಕಿಗಳನ್ನು ಸೇರಿಸುವ ಚಟುವಟಿಕೆಯ ಮೂಲಕ ಮಕ್ಕಳು, ಚಿತ್ರ-ರಚನೆ ಮಾಡಿ ಪಕ್ಷಿಗಳನ್ನು ಗುರುತಿಸಲು ಕಲಿಯಬಹುದು.

ಜಾನಪದ ಕಲೆ – ನಿಮ್ಮ ಸ್ವಂತ ಪಕ್ಷಿಯನ್ನು ರಚಿಸಿ
ನಿಮ್ಮದೇ ಆದ ಪಕ್ಷಿಯ ಜಾನಪದ ಚಿತ್ರ-ಕಲೆ ರಚಿಸಿ. ಸುಂದರವಾದ ಫಾರೆಸ್ಟ್ ವಾಗ್‌ಟೇಲ್‌ನಿಂದ ಸ್ಫೂರ್ತಿ ಪಡೆಯಿರ!

ಪಕ್ಷಿಗಳ ಬಗ್ಗೆ ತಿಳಿಯಿರಿ
ಪಕ್ಷಿ ವೀಕ್ಷಣೆಗೆ ನೀವು ಹೊಸಬರೇ ? ಪಕ್ಷಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ವಿಶೇಷವಾಗಿ, ಹಕ್ಕಿ ವೀಕ್ಷಣೆಯ ಹವ್ಯಾಸವನ್ನು ಮುಂದುವರಿಸಲು ಸಹಾಯ ಮಾಡುವ ಈ ವಿಡಿಯೋಗಳನ್ನು ಅನ್ವೇಷಿಸಿ.